Sunday, 11 September 2011

ನಮ್ಮ ನವೋದಯ...

ಬೆಟ್ಟ ನದಿ ಕಾಡುಗಳ ನಡುವೆ ಬೆಳೆದ 
ವಿದ್ಯಾ ದೇಗುಲ ನಮ್ಮ ನವೋದಯ
ಆಟದಿ ಪಾಠದಿ ಊಟದಿ ಮೆರೆವ
ಶಾರದೆಯ ಗುಡಿಯು ನಮ್ಮ ನವೋದಯ

ಮಲೆನಾಡ ಸಮೃದ್ದಿಯಲಿ ಹೊಮ್ಮಿದ
ಗುರುಕುಲವು  ನಮ್ಮ ನವೋದಯ
ಸಹ್ಯಾದ್ರಿ ತಪ್ಪಲಲಿ ಹೊಳೆವ
ಆಶಾಕಿರಣವೇ ನಮ್ಮ ನವೋದಯ

ನಟನ ನಾಟ್ಯ ಸ೦ಗೀತದಿ ಮರೆವ
ಕಲಾದೇಗುಲ ನಮ್ಮ ನವೋದಯ
ಗ೦ಡು ಹೆಣ್ಣು ಬೇಧ ಮರೆತು
ಕಲೆತು ಬೆಳೆವ ನಮ್ಮ ನವೋದಯ

ಮಲೆನಾಡ ಕಲೆ ಡೊಳ್ಳುಕುಣಿತವ
ಬೆಳೆಸುತಿರುವ ನಮ್ಮ ನವೋದಯ
ವಿದ್ಯೆ ಸ೦ಸ್ಕೃತಿ ಆಟ ಪಾಠದಲಿ
ಶಿವಮೊಗ್ಗೆಯ ಹೆಮ್ಮೆಯು ನಮ್ಮ ನವೋದಯ...
ನಮ್ಮ ನವೋದಯದ ದ್ವಾರ...
ನಮ್ಮ ತರಗತಿಗಳು.. 

No comments:

Post a Comment