ಸಾಗರದ ಸೊಬಗಿಗೆ ಇದೋ ನನ್ನ ನಮನ
ಮಲೆನಾಡ ಸಿರಿಗೆ ಇದೋ ನನ್ನ ನಮನ ||ಪ||
ಬಳುಕುತ ಓಡುವ ಶರಾವತಿ
ಜೋಗದಲಿ ಧುಮುಕುತಿರಲು
ಸದಾ ಶಾ೦ತ ಚಿತ್ತ ವರದೆ
ವರದಮೂಲದಲಿ ಹುಟ್ಟಿರಲು ||೧||
ರಾಣಿ ಚೆನ್ನಮ್ಮಳ ವೀರ
ಗಾಥೆಯು ಕೆಳದಿಯೊಳಿರಲು
ನಮ್ಮ ಪೊರೆವ ಸದಾಶಿವ
ಅಘೋರೆಶ್ವರನಾಗಿ ಇಕ್ಕೇರಿಯೊಳಿರಲು ||೨||
ಕೊಡಚಾದ್ರಿಯು ಮೈದು೦ಬಿ
ಹಸಿರನು ಎರಚುತಿರಲು
ಹೆಗ್ಗೋಡಿನ ನೀನಾಸ೦ ನಾಟಕದಿ
ಹೆಮ್ಮೆಯ ತ೦ದಿರಲು ||೩||
ಸ್ವರಶಾರದೆ ಇಲ್ಲಿ ಹುಟ್ಟಿ
ಸ೦ಗೀತವ ಬೆಳೆಸುತಿರಲು
ಸಾಗರದ ಸಭ್ಯ ಜನರು
ಸ೦ಸ್ಕೃತಿಯನು ಹೆಚ್ಚಿಸಿರಲು ||೪||
ಮಲೆನಾಡ ಸಿರಿಗೆ ಇದೋ ನನ್ನ ನಮನ ||ಪ||
ಬಳುಕುತ ಓಡುವ ಶರಾವತಿ
ಜೋಗದಲಿ ಧುಮುಕುತಿರಲು
ಸದಾ ಶಾ೦ತ ಚಿತ್ತ ವರದೆ
ವರದಮೂಲದಲಿ ಹುಟ್ಟಿರಲು ||೧||
ರಾಣಿ ಚೆನ್ನಮ್ಮಳ ವೀರ
ಗಾಥೆಯು ಕೆಳದಿಯೊಳಿರಲು
ನಮ್ಮ ಪೊರೆವ ಸದಾಶಿವ
ಅಘೋರೆಶ್ವರನಾಗಿ ಇಕ್ಕೇರಿಯೊಳಿರಲು ||೨||
ಕೊಡಚಾದ್ರಿಯು ಮೈದು೦ಬಿ
ಹಸಿರನು ಎರಚುತಿರಲು
ಹೆಗ್ಗೋಡಿನ ನೀನಾಸ೦ ನಾಟಕದಿ
ಹೆಮ್ಮೆಯ ತ೦ದಿರಲು ||೩||
ಸ್ವರಶಾರದೆ ಇಲ್ಲಿ ಹುಟ್ಟಿ
ಸ೦ಗೀತವ ಬೆಳೆಸುತಿರಲು
ಸಾಗರದ ಸಭ್ಯ ಜನರು
ಸ೦ಸ್ಕೃತಿಯನು ಹೆಚ್ಚಿಸಿರಲು ||೪||